ಸ್ವಾಭಿಮಾನವನ್ನು ಅಹಂಕಾರವೆಂದೂ ಸಮನ್ವಯವನ್ನು ಎಲ್ಲರ ಜೊತೆ ಅವರಂತೆಯೇ ಹೊಂದಿಕೊಂಡು ಹೋಗುವ ಮೆದುಗುಣವೆಂದೂ ತಪ್ಪಾಗಿ ಭಾವಿಸಿದ ಹಲವರಿದ್ದಾರೆ. ಆಯಾಯ ಭಾಷೆಯವರ ಜೊತೆ ಅವರವರ ಭಾಷೆಯಲ್ಲೇ ಮಾತನಾಡುವ, ಎಲ್ಲರನ್ನೂ ಬರಮಾಡಿಕೊಂಡು ಅವರಿಗೆ ಆಶ್ರಯ ನೀಡಿ ಅವರು ಪ್ರಬಲರಾಗುವಂತೆ ತಾವೇ ಪ್ರೋತ್ಸಾಹಿಸಿ ಬಳಿಕ ಅವರ ಯಜಮಾನ್ಯವನ್ನೇ ಒಪ್ಪಿಕೊಳ್ಳುವ ಗುಣವು ದೌರ್ಬಲ್ಯವೇ ಹೊರತು ಸದ್ಗುಣವೂ ಅಲ್ಲ, ಸಮನ್ವಯವೂ ಅಲ್ಲ. ಕರ್ನಾಟಕಕ್ಕೆ ತನ್ನದೇ ಆದ ವೈಶಿಷ್ಟ್ಯವಿದೆ. ಆ ವೈಶಿಷ್ಟ್ಯದ ನಾಶವು ಸಂಸ್ಕೃತಿಯ ನಾಶವೇ ಸರಿ. ಒಳ್ಳೆಯತನಕ್ಕೂ ದೌರ್ಬಲ್ಯಕ್ಕೂ ವ್ಯತ್ಯಾಸವನ್ನು ಅರಿಯಬೇಕು. ಸ್ವಾಭಿಮಾನಿಯ ಒಳ್ಳೆಯತನ ಬೇರೆ, ದುರ್ಬಲನ ಒಳ್ಳೆಯತನ ಬೇರೆ. ಕರ್ನಾಟಕವು ಇತರ ಸಂಸ್ಕೃತಿಗಳ ಒಳ್ಳೆಯ ಅಂಶಗಳನ್ನು ಬಳಸಿಕೊಂಡು ಅರಗಿಸಿಕೊಂಡು, ತಾನು ತಾನಾಗಿ ಉಳಿದು ಬೆಳೆಯಬೇಕು. ಅದು ಬಿಟ್ಟು ತನ್ನ ಭಾಷೆ, ಕಲೆ, ಜೀವನ ರೀತಿ, ಉದ್ಯೋಗಗಳನ್ನು ಅನ್ಯರ ಭಾಷೆ ಕಲೆಗಳು, ಅನ್ಯಜನ ಬಂದು ಆಕ್ರಮಿಸಿ ಅವನನ್ನು ಹಿನ್ನಲೆಗೆ ತಳ್ಳಿದರೆ ಅವನೊಬ್ಬ ನಿಷ್ಟ್ರಯೋಜಕನಾಗುತ್ತಾನೆ. ಅನ್ಯ ಪ್ರಾಂತೀಯರು ಬಂದು ಕನ್ನಡಿಗರ ಔದಾರ್‍ಯವನ್ನು ಹೊಗಳಿ ಉಬ್ಬಿಸಿದಾಗ ಉಬ್ಬಿ ಹೋದ ಕನ್ನಡಿಗ ತನಗೆ ತಾನೇ ಮಾಡಿಕೊಂಡಿರುವ ಅನ್ಯಾಯ ಅನೂಹ್ಯ. ಅದೆಲ್ಲವನ್ನೂ ವಿವರಿಸಲು ಇದು ಜಾಗ ಅಲ್ಲ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ