ಸೃಷ್ಟಿ ಸಮಾಜ ಸೇವಾ ಸಂಸ್ಥೆ

 "ಸೃಷ್ಟಿ ಸಮಾಜ ಸೇವಾ ಸಂಸ್ಥೆ"ಯು ಆರ್ಥಿಕವಾಗಿ ಹಿಂದುಳಿದ ಎಲ್ಲಾ ಸಮಾಜದವರ ಬದುಕನ್ನು ರೂಪಿಸುವಲ್ಲಿ  ಪಣ್ಣ ತೊಟ್ಟು ನಿಂತಿದೆ.  ಎಲ್ಲ ಸಮಾಜದ ಭಾಂಧವರು ಸಂಘದ ಸದಸ್ಯರಾಗಿದ್ದು.  "ಸೃಷ್ಟಿ ಒಗ್ಗಟ್ಟಿನ ಸಂಕೇತವಾಗಿ ಬೆಳೆದಿದೆ.  ಸಂಘದ ಮೊದಲನೆಯ ವರ್ಷದ ಆಚರಣೆಯನ್ನು ಶ್ರೀ ಗಜಾನನ ಹಬ್ಬದ ಮೂಲಕ ಆಚರಿಸಲಾಯಿತು. 
ಕಳೆದ ವರ್ಷ ಸುಮಾರು ಒಂದು ಲಕ್ಷ ರೂಪಾಯಿ ಮೊತ್ತದ ಆಶ್ರಮದಲಿರುವ ಅಂದ ಮಕ್ಕಳಗೆ ಹಾಸಿಗೆ, ಫ್ಯಾನ್, ಕೌಶಲ್ಯ ತರಬೆತಿಯ ಯಂತ್ರೋಪಕರಣಗಳು ಹಾಗು ಆರ್ಥಿಕವಾಗಿ ಹಿಂದುಳಿದ ಬಡ ವಿದ್ಯಾರ್ಥಿಗಳಿಗೆ  ಪುಸ್ತಕ ಸಾಮಗ್ರಿಗಳು ವಿತರಿಸಲಾಗಿದೆ.  ಸೃಷ್ಟಿ  ಸ್ವಯಂ ಸೇವಕರು  ಊರಿನ ದೇವಸ್ಥಾನದ ಯಾವುದೇ ಕಾರ್ಯಕ್ರಮವಿದ್ದರೂ  ಸೃಷ್ಟಿ ಸ್ವಯಂ ಸೇವಕರು ಯಾವುದೇ ಪ್ರತಿಫಲಾಪೇಕ್ಷ ಪಡೆಯದೆ ಸೇವೆ ನೀಡುತ್ತಾ ಬಂದಿದ್ದಾರೆ. ಅಲ್ಲದೇ ಈಗಾಗಲೆ "ಸೃಷ್ಟಿ ಸಮಾಜ ಸೇವಾ ಸಂಸ್ಥೆ" ವತಿಯಿಂದ ಗಣೇಶೋತ್ಸವ, ಹಾಗು ಧಾರ್ಮಿಕ ಕಾರ್ಯಕ್ರಮವನ್ನು ಹಲವು ವರ್ಷಗಳಿಂದ ಆಚರಿಸಲಾಗುತ್ತಿದೆ. ಇದಲ್ಲದೇ ವಿವಿಧ ಶಿಬಿರಗಳನ್ನು, ವಿವಿಧ ಸ್ಪರ್ಧೆಗಳನ್ನು, ಸ್ಪಚ್ಛತಾ ಕಾರ್ಯಕ್ರಮಗಳನ್ನು ಹೀಗೆ ವಿವಿಧ ಕಾರ್ಯಕ್ರಮವನ್ನು ಸಮಾಜ ಬಾಂಧವರಿಗೆ ಮತ್ತು ಸಾರ್ವಜನಿಕರಿಗೆ ಆಯೋಜಿಸಲಾಗಿದೆ. 
ಈ ಬಾರಿ ಗಣೇಶ್ ಹಬ್ಬದ ಸಂಭ್ರಮ ಅಂಗವಾಗಿ  "ಸೃಷ್ಟಿ ಸಮಾಜ ಸೇವಾ ಸಂಸ್ಥೆ"ಯಿಂದ ದೂರ ಉಳಿದ ಸಮಾಜ ಬಾಂಧವರನ್ನು ಒಂದೆಡೆ ಸೇರಿಸುವ ನಿಟ್ಟಿನಲ್ಲಿ ಸದಸ್ಯತ್ವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸ್ಪೂರ್ತಿ ಸಮಾಜ ಸೇವಾ ಸಂಘದ ಅಧ್ಯಕ್ಷ ಮಧುಕುಮಾರ ಕೈಗೊಂಡಿದ್ದಾರೆ. ಸಮಿತಿಯ ಸದಸ್ಯರಾದ ಪರಶುರಾಮ, ಮಂಜುನಾಥ, ಮುಂತಾದವರು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ