ಭಾರತೀಯ ಅಥವಾ ವಿಶ್ವ ಸಂಸ್ಕೃತಿಗೆ ಕರ್ನಾಟಕವು ಕೊಟ್ಟಿರುವ ಮೌಲಿಕ ಕೊಡುಗೆಗಳನ್ನು ಸೂಕ್ಷ ವಾಗಿ ಪರಿಚಯಿಸಿಕೊಟ್ಟಿದ್ದೇನೆ. ಕನ್ನಡ ಜನ ತಮ್ಮ ಪರಂಪರೆಯ ನಿಜವಾದ ಅರಿವನ್ನು ಪಡೆದಾಗ ಅವರ ಕೀಳರಿಮೆ ತೊಲಗಿ ಅವರು ಸ್ವಾಭಿಮಾನಿಗಳಾಗುತ್ತಾರೆ. ಈಗೀಗ ಕನ್ನಡ ಜನ ಹೆಚ್ಚು ಹೆಚ್ಚಾಗಿ ಕರ್ನಾಟಕದ ಬಗ್ಗೆ ತಿಳಿಯಲು ಕಾತರರಾಗುತ್ತಿದ್ದಾರೆ. ಕಾರ್ಖಾನೆ, ಕಛೇರಿ, ಸಿನಿಮಾ ಮಂದಿರ, ಶಾಲಾ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಅಕ್ಷರಸ್ಥ ಕನ್ನಡಿಗರಿಗೆ ಕರ್ನಾಟಕದ ಪರಂಪರೆಯನ್ನು ತಿಳಿಯುವ ಹಸಿವು ಹೆಚ್ಚುತ್ತಿದೆ. ಆ ಹೆಮ್ಮೆ ಅವರನ್ನು ಮುಂದಿನ ಭವಿಷ್ಯದತ್ತ ಉತ್ಸಾಹದಿಂದ ಹೆಜ್ಜೆಹಾಕಲು ಸ್ಫೂರ್ತಿಕೇಂದ್ರವೂ ಆಗುತ್ತದೆ. ಇತಿಹಾಸದ ಅರಿವು ಅತ್ಯಂತ ಅಗತ್ಯ. ಇತಿಹಾಸದ ಅರಿವು ಮನುಷ್ಯನಿಗೆ ಮಾತ್ರ ಇದೆ -ಆ ಕಾರಣದಿಂದಲೇ ಅವನಿಗೊಂದು ಸಂಸ್ಕೃತಿ ನಾಗರಿಕತೆ ಉಂಟು. ಪ್ರಾಣಿಗಳಿಗೆ ಇತಿಹಾಸದ ಅರಿವಿಲ್ಲ -ಆ ಕಾರಣದಿಂದಲೇ ಅವುಗಳಲ್ಲಿ ಪ್ರಗತಿ ಇಲ್ಲ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ